Thursday, September 5, 2013

ನಗುತ್ತಿರು ಚೆಲುವೆಯೇ

ನಗುತ್ತಿರು ಚೆಲುವೆಯೇ
ಎದುರು ಸಿಕ್ಕಾಗೊಮ್ಮೆ ಹಾಗೆಯೇ
ಕಣ್ ದೀಪ ಬೆಳಗಿಸಿ
ಕೆಂದುಟಿಯನು ಅರಳಿಸಿ.

ನೀ ಯಾರು ನನಗೆ ನಾ ಯಾರು ನಿನಗೆ ?
ಭವ ಬಂಧನಗಳ ಹಂಗೇಕೆ ನಮಗೆ
ಸ್ವಚ್ಚಂದ ಹಕ್ಕಿಗಳು ನಾವು,
ನಿನ ದಾರಿ ನಿನಗೆ ನನ ದಾರಿ ನನಗೆ.
ಆದರೆ ನಗುತ್ತಿರು ಗೆಳತಿಯೇ
ಎದುರು ಸಿಕ್ಕಗೊಮ್ಮೆ ಹಾಗೆಯೇ.

ನೀ ಮಾತಾಡು ಎನಬೇಡ ಓಲೈಸು ಎನಬೇಡ
ನಾ ಬಲ್ಲೆ ಅದೆಲ್ಲ ಆದರೆ ನಾ ಒಲ್ಲೆ.
§tÚzÉÆqÀ£Ál ºÉƸÀvÀ®è £À£ÀUÉ
ಹುಸಿಯೊಡೆಯುವ ಭರವಸೆಗಳು ನಮಗೇಕೆ ?
ಅಸಲು ಕಣ್ಣ ಕವಿತೆಗಳು ಸಾಲದೇ.
ನಗುತ್ತಿರು ಚೆಲುವೆಯೇ ಎದುರು ಸಿಕ್ಕಗೊಮ್ಮೆ ಹಾಗೆಯೇ.

ಹುಟ್ಟುಹಬ್ಬ, ಉಡುಗೊರೆ ಬೇಡವೇ ಬೇಡ
ಸುಮ್ಮನೆ ಖರ್ಚಿಗೆ ಮೂಲ
ಫೋನು ಮೆಸಜು ಬೇಡವೇ ಬೇಡ
ಸುಮ್ಮನೆ ಟೈಮು ವೇಸ್ಟು
ಅಸಲು ಹೆಸರುಗಳೇ ಬೇಡ
ಅವುಗಳ ಗುರುತೆಕೆ ಎಮಗೆ
ಮಿಡಿಯುವ ಹೃದಯಗಳು ಸಾಲದೇ

ಕೆನ್ನೆಯುಬ್ಬಿಸಿ ಬಂದರೆ ಬೇಜಾರಾದೆ ಎನುವೆ
ಕಣ್ಣು ಒಳ ಹೋದರೆ ಚಿಂತೆಯಿದೆ ಎನುವೆ
ಹುಬ್ಬು ಗಂಟಿಕ್ಕಿದರೆ ದುಗುಡವಿದೆ ಮನದಿ ಎನುವೆ 
ನೀ ಹೇಗಾದರೂ ಬಾ ಚಿಂತೆಯಿಲ್ಲ
ನಾ ಮಾತ್ರ ತುಟಿಯಂಚಿನ ನಸು ನಗುವಾಗಿಯೇ ಬರುವೆ.

ನಿನ್ನ ತೊಂದರೆಗಳು ನನಗೆ ಬೇಡ
ನನ್ನವು ನಿನಗೆ ಬೇಡ
ಈಗಿರುವ ಬಾಳ ಜಂಜಡಗಳೇನು ಕಡಿಮೆಯೇ..?
ಕೊಡಬಹುದೇನು ನಾ ನಿನಗೆ ನೀ ಎನಗೆ
ಹುಸಿಯರಿಯದ ನಗೆಯನ್ನು ಹೊರತು..
ಹೃದಯ ಹಗುರಾಗಿಸುವ ಹೊತ್ತುಗಳ ಹೊರತು..
ಅದಕ್ಕೆ ನಗುತ್ತಿರು ಗೆಳತಿಯೇ ಎದುರು ಸಿಕ್ಕಾಗೊಮ್ಮೆ ಹಾಗೆಯೇ
                              -ಸoಮಚಿತ್ತ 

No comments:

Post a Comment